2 ಪೂರ್ವಕಾಲವೃತ್ತಾ 35 : 1 (KNV)
ಇದಲ್ಲದೆ ಯೋಷೀಯನು ಯೆರೂಸ ಲೇಮಿನಲ್ಲಿ ಕರ್ತನಿಗೆ ಪಸ್ಕವನ್ನು ಆಚರಿ ಸಿದನು. ಮೊದಲನೇ ತಿಂಗಳ ಹದಿನಾಲ್ಕನೇ ದಿವಸ ದಲ್ಲಿ ಪಸ್ಕದ ಕುರಿಯನ್ನು ವಧಿಸಿದರು.
2 ಪೂರ್ವಕಾಲವೃತ್ತಾ 35 : 2 (KNV)
ಆಗ ಅವನು ಯಾಜಕರನ್ನು ಅವರವರ ಕೆಲಸಗಳಲ್ಲಿ ನಿಲ್ಲಿಸಿ ಕರ್ತನ ಆಲಯದ ಸೇವೆ ಮಾಡುವದಕ್ಕೆ ಅವರನ್ನು ದೃಢ ಪಡಿಸಿ,
2 ಪೂರ್ವಕಾಲವೃತ್ತಾ 35 : 3 (KNV)
ಸಮಸ್ತ ಇಸ್ರಾಯೇಲ್ಯರಿಗೆ ಬೋಧಿಸತಕ್ಕ ವರೂ ಕರ್ತನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವಿಲ್ಲದ ಹಾಗೆ ನೀವು ಅದನ್ನು ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನು ಕಟ್ಟಿಸಿದ ಮನೆಯಲ್ಲಿ ಇರಿಸಿ ನಿಮ್ಮ ದೇವರಾದ ಕರ್ತನನ್ನೂ ಆತನ ಜನವಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.
2 ಪೂರ್ವಕಾಲವೃತ್ತಾ 35 : 4 (KNV)
ಇದಲ್ಲದೆ ಇಸ್ರಾ ಯೇಲಿನ ಅರಸನಾದ ದಾವೀದನ ಬರಹದ ಪ್ರಕಾರ ವಾಗಿಯೂ ಅವನ ಮಗನಾದ ಸೊಲೊಮೋನನ ಬರಹದ ಪ್ರಕಾರವಾಗಿಯೂ ನಿಮ್ಮ ಸರತಿಗಳಲ್ಲಿ ನಿಮ್ಮ ಪಿತೃಗಳ ಮನೆಗಳ ಪ್ರಕಾರ ಸಿದ್ಧಮಾಡಿಕೊಂಡು
2 ಪೂರ್ವಕಾಲವೃತ್ತಾ 35 : 5 (KNV)
ಜನರಾದ ನಿಮ್ಮ ಸಹೋದರರ ಪಿತೃಗಳ ಕುಟುಂಬ ಗಳ ವಿಭಾಗದ ಪ್ರಕಾರವಾಗಿ ಪರಿಶುದ್ಧ ಸ್ಥಾನದಲ್ಲಿ ನಿಲ್ಲಿರಿ.
2 ಪೂರ್ವಕಾಲವೃತ್ತಾ 35 : 6 (KNV)
ಪಸ್ಕವನ್ನು ವಧಿಸಿ ನಿಮ್ಮನ್ನು ಪರಿಶುದ್ಧ ಮಾಡಿ ಕೊಂಡು ಕರ್ತನು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ ಅಂದನು.
2 ಪೂರ್ವಕಾಲವೃತ್ತಾ 35 : 7 (KNV)
ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಜನ ರಿಗೆ ಪಸ್ಕದ ಬಲಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನು ಕೊಟ್ಟನು; ಇವೆಲ್ಲಾ ಅರಸನ ಸೊತ್ತಿನಿಂದಲೇ
2 ಪೂರ್ವಕಾಲವೃತ್ತಾ 35 : 8 (KNV)
ಹಾಗೆಯೇ ಅವನ ಪ್ರಧಾನರು ಜನರಿಗೂ ಯಾಜಕ ರಿಗೂ ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ ಜೆಕರೀಯನೂ ಯೆಹೀಯೇಲನೂ ಪಸ್ಕದ ಬಲಿ ಗೋಸ್ಕರ ಎರಡು ಸಾವಿರದ ಆರು ನೂರು ಮರಿ ಗಳನ್ನೂ ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.
2 ಪೂರ್ವಕಾಲವೃತ್ತಾ 35 : 9 (KNV)
ಇದಲ್ಲದೆ ಲೇವಿಯರಲ್ಲಿ ಪ್ರಧಾನರಾದ ಕೋನನ್ಯನೂ ಅವನ ಸಹೋದರರಾದ ಶೆಮಾಯನೂ ನೆತನೇಲನೂ ಹಷಲ್ಯನೂ ಯೆಗೀಯೇಲನೂ ಯೋಜಾಬಾದನೂ ಪಸ್ಕದ ಬಲಿಗಳ ನಿಮಿತ್ತವಾಗಿ ಐದು ಸಾವಿರ ಮರಿಗಳನ್ನೂ ಐನೂರು ಎತ್ತುಗಳನ್ನೂ ಲೇವಿಯರಿಗೆ ಕೊಟ್ಟರು.
2 ಪೂರ್ವಕಾಲವೃತ್ತಾ 35 : 10 (KNV)
ಹೀಗೆಯೇ ಅರಸನ ಆಜ್ಞೆಯ ಪ್ರಕಾರ ಸೇವೆಯು ಸಿದ್ಧಮಾಡಲ್ಪಟ್ಟಿತು. ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ ಲೇವಿಯರು ತಮ್ಮ ತಮ್ಮ ಸರತಿಗಳಲ್ಲಿಯೂ ನಿಂತಿದ್ದರು.
2 ಪೂರ್ವಕಾಲವೃತ್ತಾ 35 : 11 (KNV)
ಲೇವಿಯರು ಪಸ್ಕದ ಕುರಿಯನ್ನು ವಧಿಸಿದ ತರು ವಾಯ ಯಾಜಕರು ಅವರ ಕೈಯಿಂದ ರಕ್ತವನ್ನು ತಕ್ಕೊಂಡು ಚಿಮುಕಿಸಿದರು; ಆದರೆ ಲೇವಿಯರು ಚರ್ಮ ವನ್ನು ಸುಲಿದರು;
2 ಪೂರ್ವಕಾಲವೃತ್ತಾ 35 : 12 (KNV)
ಮೋಶೆಯ ಪುಸ್ತಕದಲ್ಲಿ ಬರೆಯ ಲ್ಪಟ್ಟ ಹಾಗೆ ಕರ್ತನಿಗೆ ಅರ್ಪಿಸುವದಕ್ಕೋಸ್ಕರ ಜನರಿಗೆ ಆಯಾ ಕುಟುಂಬಗಳ ಶಾಖೆಗಳ ಪ್ರಕಾರ ಕೊಡಲು ಅವರು ದಹನಬಲಿಗಳನ್ನು ಹಾಗೆ ಎತ್ತುಗಳನ್ನು ತೆಗೆದಿಟ್ಟರು.
2 ಪೂರ್ವಕಾಲವೃತ್ತಾ 35 : 13 (KNV)
ಹೀಗೆ ಕಟ್ಟಳೆಯ ಪ್ರಕಾರ ಪಸ್ಕವನ್ನು ಬೆಂಕಿಯಿಂದ ಬೇಯಿಸಿದರು. ಆದರೆ ಪರಿಶುದ್ಧವಾದ ವುಗಳನ್ನು ಗಡಿಗೆಗಳಲ್ಲಿಯೂ ತಪ್ಪಲೆಗಳಲ್ಲಿಯೂ ಕೊಪ್ಪರಿಗೆಗಳಲ್ಲಿಯೂ ಬೇಯಿಸಿ ಶೀಘ್ರವಾಗಿ ಜನರೆ ಲ್ಲರಿಗೆ ಕಳುಹಿಸಿದರು.
2 ಪೂರ್ವಕಾಲವೃತ್ತಾ 35 : 14 (KNV)
ತರುವಾಯ ತಮಗೋಸ್ಕ ರವೂ ಯಾಜಕರಿಗೋಸ್ಕರವೂ ಸಿದ್ಧಮಾಡಿದರು. ಯಾಕಂದರೆ ಆರೋನನ ಮಕ್ಕಳಾದ ಯಾಜಕರು ರಾತ್ರಿಯ ಪರ್ಯಂತರ ದಹನ ಬಲಿಗಳನ್ನೂ ಕೊಬ್ಬನ್ನೂ ಅರ್ಪಿಸುವದರಲ್ಲಿದ್ದರು. ಆದದರಿಂದ ಲೇವಿಯರು ತಮಗೋಸ್ಕರವೂ ಆರೋನನ ಮಕ್ಕಳಾದ ಯಾಜಕರಿ ಗೋಸ್ಕರವೂ ಸಿದ್ಧಮಾಡಿದರು.
2 ಪೂರ್ವಕಾಲವೃತ್ತಾ 35 : 15 (KNV)
ದಾವೀದನೂ ಆಸಾ ಫನೂ ಹೇಮಾನನೂ ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು; ಹಾಗೆಯೇ ದ್ವಾರಪಾಲಕರು ಪ್ರತಿಯೊಂದು ಬಾಗಲಲ್ಲಿ ಇದ್ದರು; ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು; ಯಾಕಂದರೆ ಅವರ ಸಹೋದರರಾದ ಲೇವಿಯರು ಅವರ ನಿಮಿತ್ತ ಸಿದ್ಧಮಾಡಿದರು.
2 ಪೂರ್ವಕಾಲವೃತ್ತಾ 35 : 16 (KNV)
ಹೀಗೆಯೇ ಅರಸನಾದ ಯೋಷೀಯನ ಆಜ್ಞೆಯ ಪ್ರಕಾರ ಪಸ್ಕ ವನ್ನು ಆಚರಿಸುವದಕ್ಕೂ ಕರ್ತನ ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸುವದಕ್ಕೂ ಅದೇ ದಿವಸ ದಲ್ಲಿ ಕರ್ತನ ಸೇವೆಯು ಸಿದ್ಧವಾಯಿತು.
2 ಪೂರ್ವಕಾಲವೃತ್ತಾ 35 : 17 (KNV)
ಸಿದ್ಧವಾಗಿದ್ದ ಇಸ್ರಾಯೇಲಿನ ಮಕ್ಕಳು ಆ ಕಾಲದಲ್ಲಿ ಪಸ್ಕವನ್ನೂ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನೂ ಏಳು ದಿವಸ ಆಚರಿಸಿದರು.
2 ಪೂರ್ವಕಾಲವೃತ್ತಾ 35 : 18 (KNV)
ಪ್ರವಾದಿಯಾದ ಸಮುವೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿದ್ದಿಲ್ಲ. ಇಸ್ರಾಯೇಲಿನ ಸಮಸ್ತ ಅರಸುಗಳಲ್ಲಿ ಯೋಷೀಯನೂ ಯಾಜಕರೂ ಲೇವಿಯರೂ ಸಿದ್ಧವಾಗಿದ್ದ ಯೆಹೂದ ಇಸ್ರಾಯೇಲ್ಯ ರೆಲ್ಲರೂ ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.
2 ಪೂರ್ವಕಾಲವೃತ್ತಾ 35 : 19 (KNV)
ಯೋಷೀ ಯನ ಆಳಿಕೆಯ ಹದಿನೆಂಟನೇ ವರುಷದಲ್ಲಿ ಈ ಪಸ್ಕವು ಆಚರಿಸಲ್ಪಟ್ಟಿತು.
2 ಪೂರ್ವಕಾಲವೃತ್ತಾ 35 : 20 (KNV)
ಇದೆಲ್ಲಾ ಆದ ತರುವಾಯ ಯೋಷೀಯನು ಮಂದಿರವನ್ನು ಸಿದ್ಧಮಾಡಿದ ಮೇಲೆ ಐಗುಪ್ತದ ಅರಸ ನಾದ ನೆಕೋ ಯೂಫ್ರೇಟೀಸ್‌ ಬಳಿಯಲ್ಲಿ ಕರ್ಕೆವಿಾ ಷಿಗೆ ಯುದ್ಧ ಮಾಡಲು ಬಂದನು;
2 ಪೂರ್ವಕಾಲವೃತ್ತಾ 35 : 21 (KNV)
ಯೋಷೀಯನು ಅವನ ಮೇಲೆ ಯುದ್ಧಕ್ಕೆ ಹೋದನು. ಆದರೆ ಇವನು ಯೋಷೀಯನ ಬಳಿಗೆ ಸೇವಕರನ್ನು ಕಳುಹಿಸಿ--ಯೆಹೂದದ ಅರಸನೇ, ನನಗೆ ನಿನಗೆ ಏನು? ಈ ಹೊತ್ತು ನಿನ್ನ ಮೇಲೆ ಅಲ್ಲ, ನಾನು ಯುದ್ಧಮಾಡುವ ಮನೆಯ ಮೇಲೆ ಬರುತ್ತೇನೆ; ತ್ವರೆಮಾಡು ಎಂದು ದೇವರು ನನಗೆ ಹೇಳಿದ್ದಾನೆ. ನನ್ನ ಸಂಗಡ ಇರುವ ದೇವರು ನಿನ್ನನ್ನು ನಾಶ ಮಾಡದ ಹಾಗೆ ನೀನು ಆತನ ಮುಂದೆ ಸುಮ್ಮನಿರು.
2 ಪೂರ್ವಕಾಲವೃತ್ತಾ 35 : 22 (KNV)
ಆದಾಗ್ಯೂ ಯೋಷೀ ಯನು ತನ್ನ ಮುಖವನ್ನು ಅವನ ಕಡೆಯಿಂದ ತಿರುಗಿಸದೆ ಅವನ ಸಂಗಡ ಯುದ್ಧಮಾಡಲು ತನ್ನನ್ನು ಮರೆ ಮಾಜಿದನು. ಅವನು ದೇವರ ಬಾಯಿಂದ ಬಂದ ನೆಕೋನನ ಮಾತುಗಳನ್ನು ಕೇಳದೆ ಮೆಗಿದ್ದೋನು ತಗ್ಗಿನಲ್ಲಿ ಯುದ್ಧಮಾಡ ಬಂದನು.
2 ಪೂರ್ವಕಾಲವೃತ್ತಾ 35 : 23 (KNV)
ಆಗ ಬಿಲ್ಲುಗಾ ರರು ಅರಸನಾದ ಯೋಷೀಯನ ಮೇಲೆ ಎಸೆದರು; ಅರಸನು ತನ್ನ ಸೇವಕರಿಗೆ--ನನ್ನನ್ನು ಆಚೆಗೆ ಒಯ್ಯಿರಿ; ಯಾಕಂದರೆ ಬಹು ಗಾಯಪಟ್ಟಿದ್ದೇನೆ ಅಂದನು.
2 ಪೂರ್ವಕಾಲವೃತ್ತಾ 35 : 24 (KNV)
ಆದದರಿಂದ ಅವನ ಸೇವಕರು ಆ ರಥದೊಳಗಿಂದ ಅವನನ್ನು ತೆಗೆದುಕೊಂಡು ಅವನಿಗಿದ್ದ ಎರಡನೇ ರಥ ದಲ್ಲಿ ಅವನನ್ನು ಇರಿಸಿ ಯೆರೂಸಲೇಮಿಗೆ ತಂದರು. ಅವನು ಅಲ್ಲಿ ಸತ್ತು ತನ್ನ ಪಿತೃಗಳ ಸಮಾಧಿಗಳಲ್ಲಿ ಹೂಣಲ್ಪಟ್ಟನು. ಸಮಸ್ತ ಯೆಹೂದ ಯೆರೂಸಲೇಮಿ ನವರು ಯೋಷೀಯನಿಗೋಸ್ಕರ ದುಃಖಪಟ್ಟರು.
2 ಪೂರ್ವಕಾಲವೃತ್ತಾ 35 : 25 (KNV)
ಇದಲ್ಲದೆ ಯೆರೆವಿಾಯನು ಯೋಷೀಯನಿಗೋಸ್ಕರ ಗೋಳಾಡಿದನು. ಹಾಡುಗಾರರೂ ಹಾಡುಗಾರ್ತಿ ಯರೂ ಯೋಷೀಯನಿಗೋಸ್ಕರ ಇದುವರೆಗೂ ತಮ್ಮ ಗೋಳಾಟಗಳಲ್ಲಿ ಹೇಳುತ್ತಾರೆ. ಇದು ಇಸ್ರಾಯೇಲಿ ನಲ್ಲಿ ನೇಮಕವಾಯಿತು. ಇಗೋ, ಅವು ಪ್ರಲಾಪ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
2 ಪೂರ್ವಕಾಲವೃತ್ತಾ 35 : 26 (KNV)
ಆದರೆ ಯೋಷೀಯನ ಮಿಕ್ಕಾದ ಕ್ರಿಯೆಗಳು, ಕರ್ತನ ನ್ಯಾಯಪ್ರಮಾಣದಲ್ಲಿ ಬರೆಯಲ್ಪಟ್ಟ ಹಾಗೆ ಅವನು ಮಾಡಿದ ಉಪಕಾರಗಳೂಅವನ ಕ್ರಿಯೆಗಳೂ ಮೊದಲನೆಯವುಗಳೂ ಕಡೆ ಯವುಗಳೂ ಇಸ್ರಾಯೇಲ್‌ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
2 ಪೂರ್ವಕಾಲವೃತ್ತಾ 35 : 27 (KNV)
ಅವನ ಕ್ರಿಯೆಗಳೂ ಮೊದಲನೆಯವುಗಳೂ ಕಡೆ ಯವುಗಳೂ ಇಸ್ರಾಯೇಲ್‌ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: